ಶ್ರೀಮತೇ ರಾಮಾನುಜಾಯನಮಃ
ತಿರುಪ್ಪಾವೈ
ಪದ್ಯ-೧.
ಓ ದಿವ್ಲ್ಯಾಭರಣಗಳಿಂದ ಭೂಷಿತರಾಗಿರುವ ಗೆಳತಿಯರೇ, ಸಂಪತ್ ಸಂಮೃದ್ಧವಾದ ಗೋಕುಲದಲ್ಲಿ ವಾಸಿಸುತ್ತಿರುವ ಬಾಲವನಿತೆಯರೇ,ತಿಂಗಳುಗಳಲ್ಲೆಲ್ಲಾ ಶ್ರೇಷ್ಠವೆನಿಸಿದ ಈ ಮಾರ್ಹಳಿ (ಧನುರ್ಮಾಸ) ಮಾಸವು ಪೂರ್ಣ ಚಂದ್ರೋದಯದಿಂದ ಕೂಡಿರುವ ಶುಕ್ಲಪಕ್ಷದ ಈ ಶುಭದಿನವೂ
ನಮಗೆ ಲಭಿಸಿದೆ. ಯಮುನಾನದಿಯಲ್ಲಿ ಸ್ನಾನ ಮಾಡಲು ಆಸಕ್ತಿಯುಳ್ಳವರೆಲ್ಲರೂ ಬೇಗ ಬನ್ನಿ. ವೇಲಾಯುಧಧಾರಿಯಾದ ನಂದಗೋಪನ ಕುಮಾರನು,
ಸುಂದರವಾದ ಕಣ್ಣುಗಳನ್ನು ಪಡೆದಿರುವ ಯಶೋಧೆಗೆ ಸಿಂಹದ ಮರಿಯಂತೆ ತೋರುವವನೂ, ಕಾಳಮೇಘನಂತೆ, ನೀಲಮೇಘಶ್ಯಾಮ ವರ್ಣವುಳ್ಳವನೂ,
ತಾವರೆಪುಷ್ಪದಂತೆ ಕಣ್ಣುಗಳುಳ್ಳವನೂ, ಸೂರ್ಯಚಂದ್ರರಂತೆ ಮುಖವುಳ್ಳವನೂ ಆದ ಶ್ರೀಮನ್ನಾರಾಯಣನೇ ನಮಗೆ ನಮ್ಮ ವ್ರತಾಚರಣೆಗೆ ಅಗತ್ಯವಾದ ಕೈಂಕರ್ಯ
ರೂಪವಾದ ಪಾದ್ಯವನ್ನು ಕೊಡುವನು. ಆದ್ದರಿಂದ ಎಲ್ಲರೂ ಮೆಚ್ಚುವ ರೀತಿಯಲ್ಲಿ ಈ ವ್ರತವನ್ನು (ತಿರುಪ್ಪಾವೈ) ಆಚರಿಸೋಣ, ಬೇಗ ಬೇಗ ಬನ್ನಿರಿ.
No comments:
Post a Comment