ಪದ್ಯ- ೩೦
ಹಡಗುಗಳುಳ್ಳ ಸಮುದ್ರವನ್ನು ಕಡೆದ ಸರ್ವೇಶ್ವರನಾದ ಮಾಧವನೂ, ಕೇಶವನೂ ಆದ ಶ್ರೀ ಕೃಷ್ಣನನ್ನು ಪೂರ್ಣಚಂದ್ರನಂತೆ ಮುಖವುಳ್ಳ ದಿವ್ಯ ಆಭರಣಗಳನ್ನು ಧರಿಸಿರುವ ಗೋಪಿಯರು ಅವನ ಬಳಿ ಬಂದು ಅವನ್ನನ್ನು ನಮಸ್ಕರಿಸಿ ಸ್ತುತಿಸಿ ಆ ಗೋಕುಲದಲ್ಲಿ ತಮಗೆ ಇಷ್ಟವಾದ ಪುರುಷಾರ್ಥವನ್ನು ಪಡೆದ ಪ್ರಕಾರವನ್ನು ಸುಂದರವಾದ ಶ್ರೀ ವಿಲ್ಲಿ ಪುತ್ತೂರಿನಲ್ಲಿ ಶೀತಳವಾದ ಕಮಲಪುಷ್ಪದ ಜಪಮಣಿಹಾರವನ್ನು ಧರಿಸಿರುವ ಬ್ರಾಹ್ಮಣೋತ್ತಮರಾದ ಶ್ರೀ ವಿಷ್ನುಚಿತ್ತರ ಮಗಳಾದ ಗೋದಾದೇವಿಯು ಹೇಳಿದ ಉತ್ತಮ ತಮಿಳು ಭಾಷೆಯಲ್ಲಿರುವ, ಮಾಲೆಯಂತಿರುವ, ಈ ಮೂವತ್ತು ಪಾಶುರಗಳನ್ನು(ಪದ್ಯ) ಒಂದು ಪಾಶುರವನ್ನೂ ಬಿಡದೆ ಈ ಭೂಲೋಕದಲ್ಲಿ ಅನುಸಂಧಾನ ಮಾಡುವವರು ನಾಲ್ಕು ಬೆಟ್ಟಗಳಂತೆ ಉನ್ನತವಾಗಿರುವ ಚತುರ್ಭುಜಗಳಿಂದ ಶೋಭಿಸುವ ಕೆಂಪಾದ ದಿವ್ಯ ನೇತ್ರಗಳುಳ್ಳ ಸುಂದರವಾದ ಮುಖಾರವಿಂದವನ್ನು ಪಡೆದಿರುವ ಶ್ರೀಪತಿಯಾದ ಪರಮಾತ್ಮನಿಂದ ಇಹ ಪರಗಳೆರಡರಲ್ಲೂ, ಎಲ್ಲೆಲ್ಲೂ, ಶ್ರೀ ಸಹಿತನಾದ ಪರಮಾತ್ಮನ ಪರಮಾತ್ಮನ ಪರಮಾನುಗ್ರಹವನ್ನು ಪಡೆದು ಪರಮಾನಂದಭರಿತರಾಗುವರು. ನಮ್ಮ ಅದ್ವಿತೀಯವಾದ ವ್ರತವು ಶುಭವಾಗಿ ನೆರವೇರುವುದು.
Sunday, February 15, 2009
Tuesday, February 10, 2009
ತಿರುಪ್ಪಾವೈ- ಶ್ರೀ ಬಿ. ಶ್ರೀ ರಾಮಮೂರ್ತಿಯವರಿಂದ
ಪದ್ಯ-
೨೯ಪ್ರಾತಃ ಕಾಲದಲ್ಲಿ ನಾವೆಲ್ಲರೂ ಬಂದು ನಿನಗೆ ನಮಸ್ಕರಿಸಿ, ಪೂಜಿಸಿ, ಕಮಲದಂತಿರುವ ನಿನ್ನ ದಿವ್ಯ ಪಾದಗಳನ್ನು ಸ್ತುತಿಸಿ ಮಂಗಳಾಶಾಸನ ಮಾಡುವುದರ ಪ್ರಯೋಜನವನ್ನು ಕೇಳುವವನಾಗು. ಹಸುಗಳನ್ನು ಪೋಷಿಸಿ ಅವುಗಳಿಂದ ಜೀವನ ಸಾಗಿಸುವ ನಮ್ಮ ಗೋಕುಲದಲ್ಲಿ ಹುಟ್ಟಿರುವ ನೀನು ನಮ್ಮಿಂದ ಸೇವಾಕಾರ್ಯಗಳನ್ನು ಅಂಗೀಕರಿಸದೆ ಇರಬೇಡ. ಗೋವಿಂದನೇ! ನಾವು ಈಸರೈ ಯೆಂಬ ವಾದ್ಯವನ್ನು ನುಡಿಸುತ್ತಾ ಬಂದಿರುವದರಲ್ಲಿ ಎಂದೆಂದಿಗೂ ಅಂದರೆ ಏಳು ಏಳು ಜನ್ಮಗಳಲ್ಲಿಯೂ ನಿನ್ನೊಂದಿಗೆ ಸಂಬಂಧ ಪಡೆದವರಾಗಿರಬೇಕು. ನಿನಗೆ ನಾವೆಲ್ಲರೂ ದಾಸರಾಗಿ ಕೈಂಕರ್ಯ (ಸೇವೆ) ಮಾಡುತ್ತೇವೆ. ನಮ್ಮ ಇತರ ಸ್ವಾರ್ಥ, ಆಸೆಗಳನ್ನೆಲ್ಲಾ ನಿನ್ನನ್ನು ಹೊಂದುವ ಸಲುವಾಗಿ ಮಾರ್ಪಡಿಸು. ನಮ್ಮ ಅದ್ವಿತೀಯವಾದ ವ್ರತವು ಶುಭವಾಗಿ ನೆರವೇರುತ್ತದೆ.

Monday, February 9, 2009
Tiruppaavai lectures by Sri B. Sree Rama Murthy
ಪದ್ಯ - ೨೮
ಹಸುಗಳನ್ನು ಮೇಯಿಸುತ್ತಾ ಕಾಡನ್ನು ಸೇರಿ ಅಲ್ಲಿಯೇ ಊಟಮಾಡುವೆವು. ಏನೂ ಅರಿಯದ ಅಮಾಯಕ ಗೋಕುಲವೆಂಬ ಹಳ್ಳಿಯಲ್ಲಿ ಹುಟ್ಟಿರುವ ನಾವು ನಿನ್ನನ್ನು ನಮ್ಮ ಬಂಧುವಾಗಿ ಪಡೆಯುವ ಭಾಗ್ಯವನ್ನು ಪಡೆದಿದ್ದೇವೆ. ಯಾವ ಕೊರತೆಯೂ ಇಲ್ಲದ ಗೋವಿಂದನೇ! ನಿನ್ನೊಂದಿಗೆ ನಮಗಿರುವ ಸಂಭಂದವು ಯಾರಿಂದಲೂ ಬೇರ್ಪಡಿಸಲಾಗದು. ನಾವು ಏನೂ ಅರಿಯದ ಬಾಲೆಯರು. ಪ್ರೀತಿಯಿಂದ ನಿನ್ನನ್ನು ಚಿಕ್ಕಚಿಕ್ಕ ಹೆಸರುಗಳಿಂದ ಕರೆದಿದ್ದೇವೆ. ಕೋಪಿಸಿಕೊಳ್ಳಬೇಡಸ್ವಾಮಿಯೇ! ನಮ್ಮ ಇಷ್ಟಾರ್ಥಗಳನ್ನು ನೀನೇ ಅನುಗ್ರಹಿಸು. ನಮ್ಮ ಅದ್ವಿತೀಯವಾದ ವ್ರತವು ಶುಭವಾಗಿ ನೆರವೇರುವುದು.
Tiruppaavai lectures by Sri B. Sree Rama Muthy
ಪದ್ಯ - ೨೭
ಶತೃಗಳನ್ನು ಜಯಿಸುವ ಗೋವಿಂದ ! ಗೋವುಗಳನ್ನು ರಕ್ಷಿಸುವ ಸ್ವಾಮಿಯೇ! ನಿನ್ನನ್ನು ಸಂಕೀರ್ತನೆಮಾಡಿ ನಿನ್ನಿಂದ ಕೈಂಕರ್ಯರೂಪವಾದ ವಾದ್ಯಗಳನ್ನು ಸ್ವೀಕರಿಸಿ ನಾವು ಪಡೆಯುವ ಸನ್ಮಾನಗಳೆಂದರೆ ಲೋಕವೆಲ್ಲಾ ಹೊಗಳುವ ಹಸ್ತಾಭರಣಗಳೂ, ತೋಳುಬಳೆಗಳೂ, ಕರ್ಣಾಭರಣಗಳೂ, ಕರ್ಣಪುಷ್ಪಗಳೂ, ಪಾದಾಭರಣಗಳೂ ಮುಂತಾದ ಅನೇಕ ವಿಧವಾದ ಆಭರಣಗಳನ್ನು ನಾವು ಧರಿಸುವೆವು. ಒಳ್ಳೆಯ ವಸ್ತ್ರಗಳನ್ನು ನಾವು ವುಡುತ್ತೇವೆ. ಅದಾದ ಮೇಲೆ, ಹಾಲಿನ ಅನ್ನವನ್ನು ಅದು ಮುಳುಗುವಷ್ಟು ತುಪ್ಪ ಬೆರಸಿ ನಿನ್ನೊಂದಿಗೆ ಸೇರಿ ಎಲ್ಲರೂಒ ಭುಜಿಸಿ ಸಂತೋಷಪಡುತ್ತೇವೆ. ಆಗ ನಮ್ಮ ಅದ್ವಿತೀಯವಾದ ವ್ರತವು ಸಿದ್ಧಿಸುತ್ತದೆ.
Thursday, February 5, 2009
ತಿರುಪ್ಪಾವೈ-ಶ್ರೀ ಬಿ. ಶ್ರೀರಾಮಮೂರ್ತಿಯವರಿಂದ
ಪದ್ಯ - ೨೬
ಭಕ್ತರಲ್ಲಿ ವಿಶೇಷವಾದ ಅಭಿಮಾನ ವುಳ್ಳವನೇ! ಮಾಣಿಕ್ಯ ಮಣಿಯಂತೆ ಪ್ರಕಾಶವಾದ ಬಣ್ಣವುಳ್ಳವನೇ, ಮಾರ್ಗಶಿರ ಮಾಸದ ಸ್ನಾನವ್ರತವನ್ನು ಮಾಡಲು ಕೆಲವು ವಸ್ತು ಬೇಕಾಗಿದೆ. ಅವು ಯಾವುವೆಂದರೆ ಈ ಭೂಮಂಡಲವೆಲ್ಲಾ ಗಡಗಡನೆ ನಡುಗುವಂತೆ ಶಬ್ಧಮಾಡುವ ಹಾಲಿನ ಬಣ್ಣದಂತೆ ಬೆಳ್ಳಗಿರುವ ನಿನ್ನ ಪಾಂಚಜನ್ಯದಂತಹ ಶಂಖಗಳು, ಢಕ್ಕಿವಾದ್ಯಗಳು, ಸ್ತುತಿ ಪಾಠಕರು, ಪಂಗಳದೀಪಗಳು, ಧ್ವಜಪತಾಕೆಗಳು, ಇವುಗಳೆಲ್ಲವನ್ನೂ ವಟಪತ್ರಶಾಯಿಯಾದ ಸ್ವಾಮಿಯೇ! ನೀನು ಕೃಪೆತೋರಿ ನಮಗೆ ಅನುಗ್ರಹಿಸು.

ತಿರುಪ್ಪಾವೈ- ಶ್ರೀ ಬಿ. ಶ್ರೀರಾಮಮೂರ್ತಿ ಯವರಿಂದ
ಪದ್ಯ - ೨೫
ಓ ದೇವ! ಪರಮ ಭಾಗ್ಯವತಿಯಾದ ದೇವಕಿ ದೇವಿಗೆ ಮಗನಾಗಿ ಹುಟ್ಟಿ ಅದೇ ರಾತ್ರಿಯೇ ಬೇರೊಬ್ಬ ತಾಯಿ ಯಶೋದೆಗೆ ಅತ್ಯಂತ ಮುದ್ದು ಕಂದನಾಗಿ ರಹಸ್ಯವಾಗಿ ಗೋಕುಲದಲ್ಲಿ ಶುಕ್ಲಪಕ್ಷದ ಚಂದ್ರನಂತೆ ದಿನೇದಿನೇ ವೃದ್ಧಿ ಹೊಂದುತ್ತಾ ಪ್ರಕಾಶಿಸುತ್ತಿರಲು ಗೂಢಚಾರರಿಂದ ಈ ವಿಷಯವರಿತು ನಿನಗೆ ದ್ರೋಹ ಬಗೆಯಲು ಪ್ರಯತ್ನಿಸಿದ ಕಂಸಾಸುರನ ದುರ್ಮಾರ್ಗವನ್ನು ವ್ಯರ್ಥಗೊಳಿಸಿ ಅವನ ಎದೆಯನ್ನು ತುಳಿದ ಓ! ಗೋಪಾಲ! ನಾವೆಲ್ಲ ಭಕ್ತಿಯಿಂದ ಪ್ರಾರ್ಥಿಸುತ್ತಾ ನಿನ್ನನ್ನು ಸೇರಿದ್ದೇವೆ. ನಮ್ಮ ಮನೋವ್ಯಥೆಗಳನ್ನೆಲ್ಲಾ ದೂರಮಾಡಿ ಆನಂದವನ್ನು ಅನುಗ್ರಹಿಸಿದರೆ ನಮ್ಮ ವ್ರತವು ಶುಭವಾಗಿ ನೆರವೇರುತ್ತದೆ.

Monday, February 2, 2009
tiruppaavai lectures by Sri B. Sree Rma Murthy
ಪದ್ಯ - ೨೪.
ತ್ರಿವಿಕ್ರಮಾವತಾರದಲ್ಲಿ ಲೋಕಗಳನ್ನೆಲ್ಲಾ ಅಳೆದ ನಿಮ್ಮ ದಿವ್ಯ ಪಾದಗಳಿಗೆ ಮಂಗಳವು.ರಾಮಾವತಾರದಲ್ಲಿ, ಲಂಕೆಯವರೆಗೂ ನಡೆದು ಬಂದು ರಾಕ್ಷ್ಸರ ಸಂಹಾರವನ್ನು ಮಾಡಿದ ನಿಮ್ಮ್ಮ ಪಾದಗಳಿಗೆ ಮಂಗಳವು. ಶಕಟಾಸುರನನ್ನು ಪಾದಗಳಿಂದ ಒದ್ದು ಸಂಹಾರಮಾಡಿದ ನಿಮ್ಮ ಪಾದಗಳಿಗೆ ಮಂಗಳವಾಗಲಿ.ಗೋವರ್ಧನ ಗಿರಿಯನ್ನು ಎತ್ತಿ ಹಿಡಿದ ನಿನ್ನ ಆಶ್ರಿತವಾತ್ಸಲ್ಯ ಗುಣಕ್ಕೆ ಮಂಗಳವಾಗಲಿ. ಶತೃಗಳನ್ನು ಜಯಿಸಿ ನಿರಸನ ಮಾಡಿದ ನಿನ್ನ ಕೈಯಲ್ಲಿರುವ ವೇಲಾಯುಧಕ್ಕೆ ಮಂಗಳವಾಗಲಿ. ಈ ರೀತಿಯಾಗಿ ನಿಮ್ಮ ಗುಣಗಾನ ಮಾಡುತ್ತಾ ನಾವು ಬಂದಿದ್ದೇವೆ.ನೀನು ನಮಗೆ ಕೃಪೆ ಮಾಡಿ ಅನುಗ್ರಹಿಸು. ನಮ್ಮ ವಿಲಕ್ಷಣ ವ್ರತವು ಶುಭವಾಗಿ ನೆರವೇರುವುದು.

tiruppaavai lecture by Sri B. Sree Rama Murthy
ಪದ್ಯ-೨೩
ಮಳೆಗಾಲದಲ್ಲಿ ಪರ್ವತದ ಒಂದು ಗುಹೆಯಲ್ಲಿ ಹೆಣ್ಣು ಸಿಂಹದ ತೆಕ್ಕೆಯಲ್ಲಿ ಮಲಗಿ ಸುಖವಾಗಿ ನಿದ್ರಿಸುವ ಸಿಂಹವು ನಿದ್ರೆಯಿಂದ ಯೆಚ್ಚೆತ್ತು ಗಾಂಭೀರ್ಯದಿಂದ ಕಣ್ಣುಗಳನ್ನು ತೆರೆದು ನೋಡುತತ್ತಾ ಶರೀರವು ರೋಮಾಂಚನದಿಂದ ಎಲ್ಲ ಕಡೆಗೂ ಮೈಯನ್ನು ಒದರಿಕೊಂಡು ಮೈಮುರಿದು ನಿಂತು ಗರ್ಜಿಸುತ್ತಾ ಹೊರಗೆ ಹೊರಟುಬರುವಂತೆ, ಓ ಸ್ವಾಮೀ,ನೀನು ನಿನ್ನ ಮಂದಿರದಿಂದ ಆಚೆಗೆ ಬಂದು ಶ್ರೇಷ್ಟವಾದ ಸಿಂಹಾಸನ ದಲ್ಲಿ ಮಂಡಿಸಿ ನಮ್ಮಾ ಕಾರ್ಯವನ್ನು ವಿಚಾರಿಸಿ, ಪರ್ಯಾಲೋಚಿಸಿ, ನಮಗೆ ಕೃಪೆಮಾಡು. ನಮ್ಮ ಅದ್ವಿತೀಯವಾದ ವ್ರತವು ಶುಭವಾಗಿ ನೆರವೇರುವುದು.

Subscribe to:
Posts (Atom)