ಪದ್ಯ- ೩೦
ಹಡಗುಗಳುಳ್ಳ ಸಮುದ್ರವನ್ನು ಕಡೆದ ಸರ್ವೇಶ್ವರನಾದ ಮಾಧವನೂ, ಕೇಶವನೂ ಆದ ಶ್ರೀ ಕೃಷ್ಣನನ್ನು ಪೂರ್ಣಚಂದ್ರನಂತೆ ಮುಖವುಳ್ಳ ದಿವ್ಯ ಆಭರಣಗಳನ್ನು ಧರಿಸಿರುವ ಗೋಪಿಯರು ಅವನ ಬಳಿ ಬಂದು ಅವನ್ನನ್ನು ನಮಸ್ಕರಿಸಿ ಸ್ತುತಿಸಿ ಆ ಗೋಕುಲದಲ್ಲಿ ತಮಗೆ ಇಷ್ಟವಾದ ಪುರುಷಾರ್ಥವನ್ನು ಪಡೆದ ಪ್ರಕಾರವನ್ನು ಸುಂದರವಾದ ಶ್ರೀ ವಿಲ್ಲಿ ಪುತ್ತೂರಿನಲ್ಲಿ ಶೀತಳವಾದ ಕಮಲಪುಷ್ಪದ ಜಪಮಣಿಹಾರವನ್ನು ಧರಿಸಿರುವ ಬ್ರಾಹ್ಮಣೋತ್ತಮರಾದ ಶ್ರೀ ವಿಷ್ನುಚಿತ್ತರ ಮಗಳಾದ ಗೋದಾದೇವಿಯು ಹೇಳಿದ ಉತ್ತಮ ತಮಿಳು ಭಾಷೆಯಲ್ಲಿರುವ, ಮಾಲೆಯಂತಿರುವ, ಈ ಮೂವತ್ತು ಪಾಶುರಗಳನ್ನು(ಪದ್ಯ) ಒಂದು ಪಾಶುರವನ್ನೂ ಬಿಡದೆ ಈ ಭೂಲೋಕದಲ್ಲಿ ಅನುಸಂಧಾನ ಮಾಡುವವರು ನಾಲ್ಕು ಬೆಟ್ಟಗಳಂತೆ ಉನ್ನತವಾಗಿರುವ ಚತುರ್ಭುಜಗಳಿಂದ ಶೋಭಿಸುವ ಕೆಂಪಾದ ದಿವ್ಯ ನೇತ್ರಗಳುಳ್ಳ ಸುಂದರವಾದ ಮುಖಾರವಿಂದವನ್ನು ಪಡೆದಿರುವ ಶ್ರೀಪತಿಯಾದ ಪರಮಾತ್ಮನಿಂದ ಇಹ ಪರಗಳೆರಡರಲ್ಲೂ, ಎಲ್ಲೆಲ್ಲೂ, ಶ್ರೀ ಸಹಿತನಾದ ಪರಮಾತ್ಮನ ಪರಮಾತ್ಮನ ಪರಮಾನುಗ್ರಹವನ್ನು ಪಡೆದು ಪರಮಾನಂದಭರಿತರಾಗುವರು. ನಮ್ಮ ಅದ್ವಿತೀಯವಾದ ವ್ರತವು ಶುಭವಾಗಿ ನೆರವೇರುವುದು.
No comments:
Post a Comment