ಪದ್ಯ - ೨೭
ಶತೃಗಳನ್ನು ಜಯಿಸುವ ಗೋವಿಂದ ! ಗೋವುಗಳನ್ನು ರಕ್ಷಿಸುವ ಸ್ವಾಮಿಯೇ! ನಿನ್ನನ್ನು ಸಂಕೀರ್ತನೆಮಾಡಿ ನಿನ್ನಿಂದ ಕೈಂಕರ್ಯರೂಪವಾದ ವಾದ್ಯಗಳನ್ನು ಸ್ವೀಕರಿಸಿ ನಾವು ಪಡೆಯುವ ಸನ್ಮಾನಗಳೆಂದರೆ ಲೋಕವೆಲ್ಲಾ ಹೊಗಳುವ ಹಸ್ತಾಭರಣಗಳೂ, ತೋಳುಬಳೆಗಳೂ, ಕರ್ಣಾಭರಣಗಳೂ, ಕರ್ಣಪುಷ್ಪಗಳೂ, ಪಾದಾಭರಣಗಳೂ ಮುಂತಾದ ಅನೇಕ ವಿಧವಾದ ಆಭರಣಗಳನ್ನು ನಾವು ಧರಿಸುವೆವು. ಒಳ್ಳೆಯ ವಸ್ತ್ರಗಳನ್ನು ನಾವು ವುಡುತ್ತೇವೆ. ಅದಾದ ಮೇಲೆ, ಹಾಲಿನ ಅನ್ನವನ್ನು ಅದು ಮುಳುಗುವಷ್ಟು ತುಪ್ಪ ಬೆರಸಿ ನಿನ್ನೊಂದಿಗೆ ಸೇರಿ ಎಲ್ಲರೂಒ ಭುಜಿಸಿ ಸಂತೋಷಪಡುತ್ತೇವೆ. ಆಗ ನಮ್ಮ ಅದ್ವಿತೀಯವಾದ ವ್ರತವು ಸಿದ್ಧಿಸುತ್ತದೆ.
No comments:
Post a Comment