ಪದ್ಯ - ೨೮
ಹಸುಗಳನ್ನು ಮೇಯಿಸುತ್ತಾ ಕಾಡನ್ನು ಸೇರಿ ಅಲ್ಲಿಯೇ ಊಟಮಾಡುವೆವು. ಏನೂ ಅರಿಯದ ಅಮಾಯಕ ಗೋಕುಲವೆಂಬ ಹಳ್ಳಿಯಲ್ಲಿ ಹುಟ್ಟಿರುವ ನಾವು ನಿನ್ನನ್ನು ನಮ್ಮ ಬಂಧುವಾಗಿ ಪಡೆಯುವ ಭಾಗ್ಯವನ್ನು ಪಡೆದಿದ್ದೇವೆ. ಯಾವ ಕೊರತೆಯೂ ಇಲ್ಲದ ಗೋವಿಂದನೇ! ನಿನ್ನೊಂದಿಗೆ ನಮಗಿರುವ ಸಂಭಂದವು ಯಾರಿಂದಲೂ ಬೇರ್ಪಡಿಸಲಾಗದು. ನಾವು ಏನೂ ಅರಿಯದ ಬಾಲೆಯರು. ಪ್ರೀತಿಯಿಂದ ನಿನ್ನನ್ನು ಚಿಕ್ಕಚಿಕ್ಕ ಹೆಸರುಗಳಿಂದ ಕರೆದಿದ್ದೇವೆ. ಕೋಪಿಸಿಕೊಳ್ಳಬೇಡಸ್ವಾಮಿಯೇ! ನಮ್ಮ ಇಷ್ಟಾರ್ಥಗಳನ್ನು ನೀನೇ ಅನುಗ್ರಹಿಸು. ನಮ್ಮ ಅದ್ವಿತೀಯವಾದ ವ್ರತವು ಶುಭವಾಗಿ ನೆರವೇರುವುದು.
No comments:
Post a Comment