ಪದ್ಯ - ೨೪.
ತ್ರಿವಿಕ್ರಮಾವತಾರದಲ್ಲಿ ಲೋಕಗಳನ್ನೆಲ್ಲಾ ಅಳೆದ ನಿಮ್ಮ ದಿವ್ಯ ಪಾದಗಳಿಗೆ ಮಂಗಳವು.ರಾಮಾವತಾರದಲ್ಲಿ, ಲಂಕೆಯವರೆಗೂ ನಡೆದು ಬಂದು ರಾಕ್ಷ್ಸರ ಸಂಹಾರವನ್ನು ಮಾಡಿದ ನಿಮ್ಮ್ಮ ಪಾದಗಳಿಗೆ ಮಂಗಳವು. ಶಕಟಾಸುರನನ್ನು ಪಾದಗಳಿಂದ ಒದ್ದು ಸಂಹಾರಮಾಡಿದ ನಿಮ್ಮ ಪಾದಗಳಿಗೆ ಮಂಗಳವಾಗಲಿ.ಗೋವರ್ಧನ ಗಿರಿಯನ್ನು ಎತ್ತಿ ಹಿಡಿದ ನಿನ್ನ ಆಶ್ರಿತವಾತ್ಸಲ್ಯ ಗುಣಕ್ಕೆ ಮಂಗಳವಾಗಲಿ. ಶತೃಗಳನ್ನು ಜಯಿಸಿ ನಿರಸನ ಮಾಡಿದ ನಿನ್ನ ಕೈಯಲ್ಲಿರುವ ವೇಲಾಯುಧಕ್ಕೆ ಮಂಗಳವಾಗಲಿ. ಈ ರೀತಿಯಾಗಿ ನಿಮ್ಮ ಗುಣಗಾನ ಮಾಡುತ್ತಾ ನಾವು ಬಂದಿದ್ದೇವೆ.ನೀನು ನಮಗೆ ಕೃಪೆ ಮಾಡಿ ಅನುಗ್ರಹಿಸು. ನಮ್ಮ ವಿಲಕ್ಷಣ ವ್ರತವು ಶುಭವಾಗಿ ನೆರವೇರುವುದು.
No comments:
Post a Comment