Tuesday, February 10, 2009

ತಿರುಪ್ಪಾವೈ- ಶ್ರೀ ಬಿ. ಶ್ರೀ ರಾಮಮೂರ್ತಿಯವರಿಂದ

ಪದ್ಯ-
೨೯ಪ್ರಾತಃ ಕಾಲದಲ್ಲಿ ನಾವೆಲ್ಲರೂ ಬಂದು ನಿನಗೆ ನಮಸ್ಕರಿಸಿ, ಪೂಜಿಸಿ, ಕಮಲದಂತಿರುವ ನಿನ್ನ ದಿವ್ಯ ಪಾದಗಳನ್ನು ಸ್ತುತಿಸಿ ಮಂಗಳಾಶಾಸನ ಮಾಡುವುದರ ಪ್ರಯೋಜನವನ್ನು ಕೇಳುವವನಾಗು. ಹಸುಗಳನ್ನು ಪೋಷಿಸಿ ಅವುಗಳಿಂದ ಜೀವನ ಸಾಗಿಸುವ ನಮ್ಮ ಗೋಕುಲದಲ್ಲಿ ಹುಟ್ಟಿರುವ ನೀನು ನಮ್ಮಿಂದ ಸೇವಾಕಾರ್ಯಗಳನ್ನು ಅಂಗೀಕರಿಸದೆ ಇರಬೇಡ. ಗೋವಿಂದನೇ! ನಾವು ಈಸರೈ ಯೆಂಬ ವಾದ್ಯವನ್ನು ನುಡಿಸುತ್ತಾ ಬಂದಿರುವದರಲ್ಲಿ ಎಂದೆಂದಿಗೂ ಅಂದರೆ ಏಳು ಏಳು ಜನ್ಮಗಳಲ್ಲಿಯೂ ನಿನ್ನೊಂದಿಗೆ ಸಂಬಂಧ ಪಡೆದವರಾಗಿರಬೇಕು. ನಿನಗೆ ನಾವೆಲ್ಲರೂ ದಾಸರಾಗಿ ಕೈಂಕರ್ಯ (ಸೇವೆ) ಮಾಡುತ್ತೇವೆ. ನಮ್ಮ ಇತರ ಸ್ವಾರ್ಥ, ಆಸೆಗಳನ್ನೆಲ್ಲಾ ನಿನ್ನನ್ನು ಹೊಂದುವ ಸಲುವಾಗಿ ಮಾರ್ಪಡಿಸು. ನಮ್ಮ ಅದ್ವಿತೀಯವಾದ ವ್ರತವು ಶುಭವಾಗಿ ನೆರವೇರುತ್ತದೆ.

No comments: