ಪದ್ಯ-೨೩
ಮಳೆಗಾಲದಲ್ಲಿ ಪರ್ವತದ ಒಂದು ಗುಹೆಯಲ್ಲಿ ಹೆಣ್ಣು ಸಿಂಹದ ತೆಕ್ಕೆಯಲ್ಲಿ ಮಲಗಿ ಸುಖವಾಗಿ ನಿದ್ರಿಸುವ ಸಿಂಹವು ನಿದ್ರೆಯಿಂದ ಯೆಚ್ಚೆತ್ತು ಗಾಂಭೀರ್ಯದಿಂದ ಕಣ್ಣುಗಳನ್ನು ತೆರೆದು ನೋಡುತತ್ತಾ ಶರೀರವು ರೋಮಾಂಚನದಿಂದ ಎಲ್ಲ ಕಡೆಗೂ ಮೈಯನ್ನು ಒದರಿಕೊಂಡು ಮೈಮುರಿದು ನಿಂತು ಗರ್ಜಿಸುತ್ತಾ ಹೊರಗೆ ಹೊರಟುಬರುವಂತೆ, ಓ ಸ್ವಾಮೀ,ನೀನು ನಿನ್ನ ಮಂದಿರದಿಂದ ಆಚೆಗೆ ಬಂದು ಶ್ರೇಷ್ಟವಾದ ಸಿಂಹಾಸನ ದಲ್ಲಿ ಮಂಡಿಸಿ ನಮ್ಮಾ ಕಾರ್ಯವನ್ನು ವಿಚಾರಿಸಿ, ಪರ್ಯಾಲೋಚಿಸಿ, ನಮಗೆ ಕೃಪೆಮಾಡು. ನಮ್ಮ ಅದ್ವಿತೀಯವಾದ ವ್ರತವು ಶುಭವಾಗಿ ನೆರವೇರುವುದು.
No comments:
Post a Comment